::

ದಾಖಲಾತಿ ಪ್ರಕ್ರಿಯೆ

ಅರ್ಹತೆ

  • ಅಭ್ಯರ್ಥಿಯು ಯು.ಜಿ.ಸಿ. ಯಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ/ಸ್ನಾತಕೋತ್ತರ ಪದವಿ ಅಥವಾ ಯಾವುದೇ ತತ್ಸಮಾನ ವಿದ್ಯಾರ್ಹತೆಯನ್ನು ಹೂಂದಿರಬೇಕು. ಹಾಗೂ ಪದವಿ/ಸ್ನಾತಕೋತ್ತರ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆಯ ನಿಗದಿತ ಎಲ್ಲಾ ಪರೀಕ್ಷೆಗಳನ್ನು ವಿಶ್ವವಿದ್ಯಾಲಯದ ಹಂತದ ಪರೀಕ್ಷೆಯಲ್ಲಿಯೇ ಉತ್ತೀರ್ಣರಾಗಿರಬೇಕು.
  • ಯು.ಜಿ.ಸಿ. ಯಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳು ನಡೆಸುವ ಪದವಿ/ಸ್ನಾತಕೋತ್ತರ ಪದವಿ ಅಥವಾ ಯಾವುದೇ ತತ್ಸಮಾನ ವಿದ್ಯಾರ್ಹತೆಯ ಎಲ್ಲಾ ವರುಷಗಳ / ಸೆಮಿಸ್ಟರ್ಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಮತ್ತು ವಿಕಲಚೇತನ (ಕಘುಆ) ಅಭ್ಯರ್ಥಿಗಳು ಆಂತರಿಕ ಅಂಕಗಳು ಸೇರಿ ಸರಾಸರಿ ಕನಿಷ್ಟ ಶೇ. 45 ಅಂಕಗಳನ್ನು ಮತ್ತು ಇತರೆ ಅಭ್ಯರ್ಥಿಗಳು ಆಂತರಿಕ ಅಂಕಗಳು ಸೇರಿ ಸರಾಸರಿ ಕನಿಷ್ಟ ಶೇ. 50 ಅಂಕಗಳನ್ನು ಗಳಿಸಿರಬೇಕು. ಇಂಜಿನಿಯರಿಂಗ್ ಪದವೀದರರು ಪದವಿಯಲ್ಲಿ ಗಣಿತ ಮತ್ತು ವಿಜ್ಞಾನವನ್ನು ಐಚ್ಛಿಕ ವಿಷಯವನಾಗಿ ವಾಸಂಗ ಮಾಡಿ ಕನಿಷ್ಟ ಶೇ. 55% ಅಂಕಗಳನ್ನು ಪಡೆದಿರಬೇಕು.

ದಾಖಲಾತಿಯ ಸಮಯದಲ್ಲಿ ಈ ಕೆಳಕಂಡ ಮೂಲ ದಾಖಲೆಗಳನ್ನು ಕಡಾಯವಾಗಿ ಸಲ್ಲಿಸಬೇಕು

  1. ಎಸ್. ಎಸ್. ಎಲ್. ಸಿ. ಅಂಕಪಟ್ಟಿ
  2. ದಿತೀಯ ಪಿ.ಯು.ಸಿ. ಅಂಕಪಟ್ಟಿ
  3. ಮೂರು ವರುಷಗಳ ಪದವಿಯ ಅಂಕಪಟ್ಟಿಗಳು (ಪುನರಾವರ್ತಿತ ಅಭ್ಯರ್ಥಿಗಳು ಪ್ರತಿ ವರ್ಷದ ಕೋಢೀಕೃತ ಅಂಕಪಟ್ಟಿಯನ್ನು ಅಥವಾ ಲಭ್ಯವಿಲ್ಲಿದ್ದಲ್ಲಿ ಎಲ್ಲಾ ಪ್ರಯತಗಳ (All Attempts) ಅಂಕಪಟ್ಟಿಗಳನ್ನು ಲಗತ್ತೀಸುವುದು)
  4. ಸ್ನಾತಕೋತ್ತರ ಪದವಿಯ ಅಂಕಪಟ್ಟಿಗಳು. (ಪುನರಾವರ್ತಿತ ಅಭ್ಯರ್ಥಿಗಳು ಪ್ರತಿ ವರ್ಷದ ಕೋಢೀಕೃತ ಅಂಕಪಟ್ಟಿಯನ್ನು ಅಥವಾ ಲಭ್ಯವಿಲ್ಲಿದ್ದಲ್ಲಿ ಎಲ್ಲಾ ಪ್ರಯತಗಳ (All Attempts) ಅಂಕಪಟ್ಟಿಗಳನ್ನು ಲಗತ್ತೀಸುವುದು)