::

ಕ್ಯಾಂಪಸ್ ಸೌಲಭ್ಯಗಳು

ಉಪನ್ಯಾಸ ಕೊಠಡಿಗಳು:

ಉಪನ್ಯಾಸ ಕೊಠಡಿಗಳು ಬಹಳ ವಿಶಾಲವಾಗಿದ್ದು ಉಪನ್ಯಾಸ ಕೊಠಡಿಗಳಲ್ಲಿ ಪೀಠೋಪಕರಣಗಳು, ಎಲ್.ಸಿ.ಡಿ ಮತ್ತು ಓ.ಎಚ್.ಪಿ ಮುಂತಾದ ಸಲಕರಣೆಗಳಿದ್ದು. ವಿಚಾರ ಸಂಕಿರಣ ಮತ್ತು ಕಾರ್ಯಾಗಾರ ತರಗತಿಗಳನ್ನು ಸುಗಮವಾಗಿ ನಡೆಸಲು ಅನುಕೂಲವಿದೆ.

ಗ್ರಂಥಾಲಯ:

ಬಿ.ಇಡಿ., ಕಾಲೇಜಿನಲ್ಲಿ ಗ್ರಂಥಾಲಯವು ಇ-ಗ್ರಂಥಾಲಯದ ಸೌಲಭ್ಯವನ್ನು ಹೂಂ¢ದ್ದು 10,000ಕ್ಕೂ ಹೆಚ್ಚಿನ ಪುಸ್ತಕಗಳಿವೆ. ಗ್ರಂಥಾಲಯವು ಗಣಕೀಕೃತಗೊಂಡು ರಾಷ್ಟ್ರೀಯ ನಿಯತಕಾಲಿಕೆಗಳು ಮತ್ತು ವೃತ್ತ ಪತ್ರಿಕೆಗಳನ್ನು ಒಳಗೊಂಡಿದೆ. ಸಿಬ್ಬಂದಿವರ್ಗದವರ ಮತ್ತು ವಿದ್ಯಾರ್ಥಿಗಳ ಉಪಯೋಗಕ್ಕಾಗಿ ಫೋಟೋ ಕಾಪಿಯರ್ ಯಂತ್ರವನ್ನು ಹೊಂದಿದೆ.

ಗಣಕಯಂತ್ರ ಪ್ರಯೋಗಲಯ:

ಗಣಕಯಂತ್ರ ಪ್ರಯೋಗಾಲಯವು ವಿದ್ಯಾರ್ಥಿ ಮತ್ತು ಶಿಕ್ಷಕನ ಅಗತ್ಯತೆಗಳನ್ನು ಪೂರೈಸಲು ಇತ್ತೀಚಿನ ಮಲ್ಟಿಮೀಡಿಯಾ ಸೌಲಭ್ಯಗಳನ್ನು ಹೊಂದಿದೆ.

ಮನಶ್ಯಾಸ್ತ್ರದ ಪ್ರಯೋಗಾಲಯ:

ಶೈಕ್ಷಣಿಕ ಮನೋಜ್ಞಾನವು ಶಿಕ್ಷಕನ ಮಾನಸಿಕ ಸಾಮರ್ಥ್ಯಗಳನ್ನು ಅರ್ಥ ಮಾಡಿಕೊಳ್ಳಲು, ವಿದ್ಯಾರ್ಥಿ ಶಿಕ್ಷಕರಿಗೆ ವಿವಿಧ ಮನೋವಿಜ್ಞಾನ ಪರೀಕ್ಷಾ ಸಾಮಗ್ರಿಗಳ ಅನುಭವದ ಮೂಲಕ ಕೈಗಳಿಂದ ಕಲಿಸಲಾಗುತ್ತದೆ.

ತಂತ್ರಜ್ಞಾನ ಪ್ರಯೋಗಾಲಯ:

ತಂತ್ರಜ್ಞಾನ ಪ್ರಯೋಗಾಲಯವು ಬೋಧನೆಗೆ ಸಂಬಂಧಿಸಿದ ಎಲ್ಲಾ ಆಧುನಿಕ ವಿಧಾನಗಳು ಒಳಗೊಂಡಿದೆ. (ಮಲ್ಟಿ ಮೀಡಿಯಾ, ಡಿವಿಡಿಗಳು, ಸ್ಲೈಡ್ ಪ್ರೊಜೆಕ್ಟರ್, ಇನ್ನು ಮುoತಾದವುಗಳನ್ನು ಒಳಗೊಂಡಿದೆ)

ವಿಜ್ಞಾನ ಪ್ರಯೋಗಾಲಯ:

ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವವಿಜ್ಞಾನಕ್ಕೆ ಸಂಬಂಧಿಸಿದ ಅಗತ್ಯವಾದ ಎಲ್ಲಾ ಉಪಕರಣಗಳು, ರಾಸಾಯನಿಕಗಳು ಮತ್ತು ಮಾದರಿಗಳೊಂದಿಗೆ ಸುಸಜ್ಜಿತವಾಗಿದ್ದು ಪ್ರೌಢಶಾಲಾ ಪಠ್ಯಕ್ರಮದ ಬೋಧನೆ ಮಾಡಲು ಅನುಕೂಲವಾಗಿದೆ.