::

ಶ್ರೀ ಸರ್ವಜ್ಞ ಶಿಕ್ಷಣ ಮಹಾವಿದ್ಯಾಲಯ

ಶ್ರೀ ಸರ್ವಜ್ಞ ಶಿಕ್ಷಣ ಸಂಸ್ಥೆ (ರಿ), ವಿಜಯನಗರ, ಬೆಂಗಳೂರು – 40 ಈ ಸಂಸ್ಥೆಯನ್ನು ಸಂಸ್ಥಾಪಕರಾದ ಶ್ರೀಯುತ ಬಿ.ಎಸ್. ಪರಮಶಿವಯ್ಯನವರು 1971ರಲ್ಲಿ ಸ್ಥಾಪಿಸಿದರು.

ಈ ಸಂಸ್ಥೆಯು ತನ್ನ ಆಶ್ರಯದಲ್ಲಿ ಶ್ರೀ ಸರ್ವಜ್ಞ ಶಿಕ್ಷಣ ಮಹಾವಿದ್ಯಾಲಯ, ಶ್ರೀ ಸರ್ವಜ್ಞ ಸಂಯುಕ್ತ ಪದವಿ ಪೂರ್ವ ಕಾಲೇಜು, ಶ್ರೀ ಸರ್ವಜ್ಞ ಕನ್ನಡ ಮತ್ತು ಆಂಗ್ಲಾ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮತ್ತು ಶ್ರೀ ಸರ್ವಜ್ಞ ಸಾರ್ವಜನಿಕ ಶಾಲೆಗಳನ್ನು ನಡೆಸುತ್ತಿದೆ.

ಈ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಶ್ರೀ ಸರ್ವಜ್ಞ ಶಿಕ್ಷಣ ಮಹಾವಿದ್ಯಾಲಯ (ಬಿ. ಇಡಿ ಕಾಲೇಜು) ವು 1980-81ರಲ್ಲಿ ಪ್ರಾರಂಭವಾಗಿ ಇದೂವರೆವಿಗೂ ನಿರಂತರವಾಗಿ ನಡೆಯುತ್ತಾ ಬಂದಿದೆ. ಶ್ರೀ ಸರ್ವಜ್ಞ ಶಿಕ್ಷಣ ಮಹಾವಿದ್ಯಾಲಯವು ಪ್ರಾರ೦ಭದಿಂದಲೂ ಬಿ.ಇಡಿ., ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಮೌಲ್ಯಾಧಾರಿತ ಶಿಕ್ಷಣವನ್ನು ನೀಡುತ್ತಾ ಬಂದಿದೆ. ಇದರೊಂದಿಗೆ ಬಿ.ಇಡಿ., ಕಾಲೇಜು ಅವಶ್ಯಕ ನವೀನ ರೀತಿಯಲ್ಲಿ ವಿನ್ಯಾಸಗೂಳಿಸಿರುವ ವಿಶಾಲವಾದ ಉಪನ್ಯಾಸ ಕೊಠಡಿಗಳನ್ನು ಮತ್ತು ಇತರ ಸೌಲಭ್ಯಗಳಾದ ಗಣಕಯಂತ್ರ ಕೊಠಡಿ, ಉತ್ತಮ ಗ್ರಂಥಾಲಯ, ವಿಜ್ಞಾನ ಪ್ರಯೋಗಾಲಯವುಳ್ಳ ಪಠ್ಯಕ್ರಮ ಪ್ರಯೋಗಾಲಯ, ಭಾಷಾ ಕೊಠಡಿ, ಮಾನವಿಕ ವಿಷಯ ಕೊಠಡಿ, ಕರಕುಶಲ ಕೊಠಡಿ, ವಿಶಾಲವಾದ ಆಟದ ಮೈದಾನ ಇತ್ಯಾದಿ ಸೌಲಭ್ಯಗಳನ್ನು ಒಳಗೊಂಡಿದೆ. ಹಾಗೂ ಉತ್ತಮ ಪ್ರಾಂಶುಪಾಲರು ಮತ್ತು ಉಪಾಧ್ಯಾಯರುಗಳನ್ನು ಹೊಂದಿದೆ ಎಂದು ತಿಳಿಸಲು ಸಂತೋಷಪಡುತ್ತೇವೆ.